ಕೀರ್ತನೆ - 1416     
 
ಹಂಗಿಸಿ ಹಂಗಿಸಿ ಎನಗೆ ಹರಿನಾಮ ನಿಲಿಸಿದರು ಭಂಗಿಸಿ ಭಂಗಿಸಿ ಎನಗೆ ಬಯಲಾಸೆ ಕೆಡಸಿದರು ಕಂಗೆಡಿಸಿ ಕಂಗೆಡಿಸಿ ಕಾಮಕ್ರೋಧವ ಬಿಡಿಸಿದರು ಹಿಂದೆ ನಿಂದಿಸಿದವರೆ ಎನ್ನ ಬಂಧುಗಳು ಬಾಯ ಬಡುಕರಿಂದ ನಾನು ಬದುಕಿದೆನು ಹರಿಯೆ ಕಾಡಿ ಕಾಡಿ ಕೈವಲ್ಯಕ್ಕೆ ಪಥವಿತ್ತರು ಕಾಸು ಹುಟ್ಟದಂತೆ ಪ್ರಾಯಶ್ಚಿತ್ತ ಮಾಡಿದರು ಮೀಸಲು ಮಾಡಿದರು ಹರಿಯ ಒಡವೆಯೆಂದು ಲೇಸು ಕೊಡೊ ನಮ್ಮಪ್ಪ ಪುರಂದರ ವಿಠಲ ನಿನ್ನ ದಾಸರ ದಾಸರ ದಾಸನೆಂದೆನಿಸಯ್ಯ.