ಕೀರ್ತನೆ - 1411     
 
ತಾಯಿ ಗೋಪಿಯಂತೆ ನಿನ್ನ ಒರಳನೆಳಸಲಿಲ್ಲ ವಾಲಿಯಂತೆ ಎದುರು ವಾದಿಸುತಿರಲಿಲ್ಲ ಭ್ರಗುಮುನಿಯಂತೆ ನಿನ್ನ ಎದೆಯ ತುಳಿಯಲಿಲ್ಲ. ಭೀಷ್ಮನಂತೆ ನಿನ್ನ ಹಣೆ ಒಡೆಯಲಿಲ್ಲ ಕೊಂಕಣದ ಎಮ್ಮೆಗೆ ಕೊಡತಿಯೇ ಮದ್ದೆಂದು ಅವರೆ ಮದ್ದು ನಿನಗೆ ಪುರಂದರ ವಿಠಲ.