ಕೀರ್ತನೆ - 1410     
 
ಶ್ರೀರಾಮ ಎಂದರೆ ಭಾಗ್ಯಕ್ಕೆ ಕಾರಣ ಶ್ರೀ ಕೃಷ್ಣ ಎಂದರೆ ದುರಿತ ನಿವಾರಣ ಎಚ್ಚತ್ತಿರು ಎಲೆ ಮನವೆ ಎಚ್ಚತ್ತಿರಲೆ ಮನವೆ ಏಕೆ ಬಯಲನು ನೆನೆವೆ ಅಚ್ಯುತಾನಂತ ಗೋವಿಂದನೆಂಬ ನಾಮದಲಿ ಎಚ್ಚತ್ತಿರೆಲೆ ಮನವೆ ಏಕೆ ಬಯಲ ನೆನೆವೆ ಅಚ್ಯುತನೆ ಆದಿ ಕೇಶವನೆ ಅನಾಥ ಬಂಧೋ ಸಲಹೆಂದು ಅಚ್ಯುತನ ಪಾದವನು ನಂಬು ಗತಿಯೆಂದು ಅನಂತಾನಂತ ದೇವರ ದೇವ ರಂಗೇಶ ಅನಂತನೆಂದರೆ ಬಲು ಭಯ ವಿನಾಶ ಅನಂತನೆಂದರೆ ತಡೆವ ಯಮಪಾಶ ಗೋವಿಂದನೆಂದರೆ ಸಕಲ ತೀರ್ಥಸ್ನಾನ ಗೋವಿಂದನೆಂದರೆ ಸಕಲ ಮೂರ್ತಿ ಧ್ಯಾನ ಗೋವಿಂದನೆಂದರೆ ಪುರಂದರ ವಿಠಲ ಕೊಡುವ ಸಕಲ ಸುಜ್ಞಾನ.