ಕೀರ್ತನೆ - 1408     
 
ನಿನ್ನಂಗುಟವು ಬೊಮ್ಮಾಂಡವನೊಡೆಯಿತು ನಿನ್ನ ನಡೆ ಜಗವ ಈರಡಿ ಮಾಡಿತು ನಿನ್ನ ಪೊಕ್ಕಳು ಸರಸಿಜನಾಭನ ಪಡೆಯಿತು ನಿನ್ನ ವಕ್ಷಃಸ್ಥಳ ಸಿರಿ ಲಕುಮಿಗೆಡೆಯಾಯಿತು ನಿನ್ನ ನಳಿದೋಳು ಸಿರಿ ಲಕುಮಿಯ ಬಿಗಿದಪ್ಪಿತು ನಿನ್ನ ಕುಡಿನೋಟ ಸಕಲ ಜೀವರ ಪೊರೆಯಿತು ನಿನ್ನ ತೊದಲ ನುಡಿ ಸಕಲ ವೇದವ ಸವಿಯಿತು ನಿನ್ನ ಅವಯವಂಗಳ ಮಹಿಮೆಯನು ಒಂದೊಂದು ಪೊಗಳಲಳವಲ್ಲ ಸಿರಿ ಪುರಂದರವಿಠಲರೇಯ ನಿನ್ನ ಅಪಾರ ಮಹಿಮೆಗೆ ನಮೋ ನಮೋ ಎಂಬೆ.