ಕೀರ್ತನೆ - 1396     
 
ಮಡುವಿನೊಳಗೆ ಗಜರಾಜ ಕಾಯ್ದನೀತ । ಮಡದಿ ದ್ರೌಪದಿಯಭಿಮಾನ ರಕ್ಷಕನೀತ । ಮಿಡುಕುವಜಾಮಿಳನ ಪಾಶ ಪರಿಹರಿಸಿ | ಕಡು ಮೆಚ್ಚಿ ಧ್ರುವಗೆ ಉನ್ನತ ಪದವಿತ್ತನೀತ | ಕಡಲಶಯನ ನೀತ ಕರುಣಾಂಬುಧಿಯೀತ | ಸಡಗರದ ಪುರಂದರ ವಿಠಲ ನೀತ ।