ಕೀರ್ತನೆ - 1395     
 
ತಮನ ಕೊಂದವನೀತ ಮಂದರೋದ್ಧರನೀತ । ಭೂಮಿಯ ನೆಗಹಿ ತಂದವನೀತ । ಕುಮತಿ ರಕ್ಕಸರನು ಸೀಳೆ ಬಲಿಯ ಬೇಡಿದ ನೀತ । ಜಮದಗ್ನಿ ಭವ ಪರಶುನಾಥನೀತ । ಸುಮನಸೇಂದ್ರನ ತನೂಭವ ಸಖನೀತ 1 ಚಮತ್ನೃತಿಯಿಂದ ಮೂರೂರು ಗೆಲಿದನೀತ | ಅಮಲ ಕಲ್ಕಿ ಮೊದಲಾದ ಅನಂತಾವತಾರ ನೀತ । ಕಮಲೇಶ ಪುರಂದರ ವಿಠಲ ನೀತ 1