ವರಮಣಿಗಳ ಕೆತ್ತಿಸಿದ ಮುಕುಟದ ಚಾರು |
ಸುರಿತ ಕಂಬು ಕಂಠ ತ್ರಿರೇಖೆ ಚತುರ್ಭುಜ |
ವರದಂತ ಪಂಕ್ತಿಯೆಸೆವ ಅಧರ ಚುಬುಕಾಗ್ರ |
ಪರೆಯ ನೊಸಲ ತಿಲಕದ ದಿವ್ಯ ಮಧುಕರ |
ಕರುಳು ಭ್ರೂಲತೆಯ ಶ್ರೀಕಾರದ ಕರ್ಣಯುಗಳ |
ಅರಳಿದ ಅರುಣ ಕಮಲದ ಅರಳನಯನದ ।
ಅರಶಂಖಕಟಿ ಶೋಭಾಭಯ ಹಸ್ತವ ಕಂಡೆ |
ತರಣಿಯನಂತ ಕಿರಣ ಜಾನುಜಂಘೆಯ ।
ಕಿರುಗೆಜ್ಜೆ ಎರಡು ಪಾದಾಂಗುಳಿಯ ನಖದ |
ವರ ವಜ್ರಾಂಕುಶ ಧ್ವಜರೇಖೆಯಿಂದೊಪ್ಪುವ |
ಚರಣ ಮಾಂದಳಿರ ಕಂಡೆ ಒಲವಿಂದ ।
ಪರಮ ಪುರುಷ ಗುಣಾತ್ಮ ನೀಲಮೇಘ ಶ್ಯಾಮ |
ಸಿರಿಯರಸು ಪುರಂದರ ವಿಠಲ ರಾಯನ ಕಂಡೆ |
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ