ಕೀರ್ತನೆ - 1387     
 
ಸುರತರುವಿರುತಿರೆ ಎಲವದಫಲ ಗಿಳಿ ಬಯಸಿಪ್ಪಂತೆ | ಹಿರಿಯರಾದರು ನೋಡ ಹರಿಪರದೈವೆಂದರಿಯದೆ ! ಗುರುಗಳಾದರು ನೋಡ ಹರಿ ಪರದೈವೆಂದರಿಯದೆ | ಸಿರಿವಿರಿಂಚಿ ಭವಾದಿಗಳೆಲ್ಲ ಹರಿಯ ಡಿಂಗರಿಗರೆಂದರಿಯದೆ | ಹಿರಿಯರಾದರು ನೋಡು ಗುರುಗಳಾದರು ನೋಡ ಸಿರಿ ಪುರಂದರ ವಿಠಲನ ತೋರಿದ ಸಿರಿ ಮಧ್ವಾಚಾರ್ಯರಿರುತಿರೆ ಗುರುಗಳಾದರು ನೋಡ |