ಕೀರ್ತನೆ - 1386     
 
ಹರಿಪರ ದೇವತೆ ಎಂಬ ಜ್ಞಾನವೇ ಜ್ಞಾನ । ಹರಿಯಡಿಗಳನೈದುವ ಮುಕುತಿಯೇ ಮುಕುತಿ | ಹರಿ ವಿರಹಿತ ಜ್ಞಾನ ಮಿಥ್ಯಾ ಜ್ಞಾನ | ಹರಿ ವಿರಹಿತ ಮುಕುತಿ ಮಾತಿನ ಮುಕುತಿ | ಹರಿಪರ ಸಿರಿ ಮಧ್ವಾಚಾರ್ಯರೇ ಗುರುಗಳು | ತ್ರೈಲೋಕ್ಯಕೆ ಪುರಂದರ ವಿಠಲನೇ ದೈವವು