ಕೀರ್ತನೆ - 1385     
 
ಒಬ್ಬ ಆಚಾರ್ಯನು ದೈವವೇ ಇಲ್ಲವೆಂಬ | ಒಬ್ಬ ಆಚಾರ್ಯನು ದೈವಕೆ ಎಂಟು ಗುಣವೆಂಬ | ಒಬ್ಬ ಆಚಾರ್ಯನು ನಿರ್ಗುಣ ನಿರಾಕಾರ ನಿರೂಹನೆಂದು- ತಾನೆ ದೈವವೆಂಬ | ಇವರೊಬ್ಬರೂ ವೇದಾರ್ಥವರಿತೂ ಅರಿಯರು | ಇವರೊಬ್ಬರೂ ಶಾಸ್ತ್ರಾರ್ಥವರಿತೂ ಅರಿಯರು | ಒಬ್ಬ ಮಧ್ವಾಚಾರ್ಯರೆ ಪುರಂದರ ವಿಠಲನೊಬ್ಬನೆ ಎಂದು ತೋರಿ ಕೊಟ್ಟವರಾಗಿ