ಕೀರ್ತನೆ - 1383     
 
ರಾಮನೊಳು ಹನುಮನು ಸೇರುವನೆಂದರಿಯಿರೊ । ರಾಮನಿಂದ ಹತವಾಯ್ತು ರಾವಣನ ಕಟಕವೆಂದರಿಯರೊ । ರಾಮನ ಪ್ರಸಾದದ ದೊರೆಗಳ ಕೆಣಕದಿರಿರೊ | ರಾಮಬಾಣಕಿದಿರಾಗದಿರಿರೊ, ದನುಜರೆಲ್ಲ | ರಾಮ ನಿಮ್ಮ ರಾವಣನ ಶಿರವ ಚೆಂಡಾಡುವನು | ರಾಮ ಪುರಂದರವಿಠಲನ ಪೊಂದಿ ಬದುಕಿರೊ