ಕೀರ್ತನೆ - 1382     
 
ರಾಮರಾಮ ಎನುತ ಅಂಬುಧಿಯ ದಾಂಟಿದೆ | ರಾಮ ರಾಮೆನುತ ಅಸುರರ ಗೆಲಿದೆ ರಾಮ ರಾಮ ಎನುತ ಭೂಮಿ ಸುತೆಯ ಪಾದವ ಕಂಡು | ರಾಮ ರಾಮ ಎನುತ ರಾಮ ಪುರಂದರವಿಠಲನ | ಉಂಗುರವಿತ್ತ ರಾಮನರ್ಧಾಂಗಿ ದೇವಿ ಚಿತ್ತೈಸು ಎನುತ