ಕೀರ್ತನೆ - 1381     
 
ಅರಿದನೊಬ್ಬ ನಾಸಿಕವ ನಿನ್ನನುಜೆಯ | ಪುರವನುರುಪಿ ದಾನವರ ಗೆದ್ದನೊಬ್ಬ | ಶರನಿಧಿಯ ದಾಂಟಿದನೊಬ್ಬ । ಸಿರಿ ಮುಡಿಯ ಮುಕುಟವ ಕಿತ್ತಿಟ್ಟನೊಬ್ಬ । ಪುರಂದರವಿಠಲರಾಯನ ತೋಟಿ ಬೇಡ | ಶರಣು ಪೊಕ್ಕು ಬದುಕುವ ಬಾರೆಲೊ ಅಣ್ಣಣ್ಣ |