ಕೀರ್ತನೆ - 1380     
 
ತುಂಗ ವಕ್ಷ ತುರೀಯ ಮೂರುತಿಯ ರಥಾಂಗ ಪಾಣಿಯ ತಂಗಿ, ತಾರೆ । ಪರಮ ಪುರುಷ ಹರಿಯ ತರಣಿ ತೇಜನ | ಅಂಗನೆಯರ ಮನವ ಸೊರೆಗೊಂಬನ ತಂಗಿ, ತಾರೆ । ತರಣಿತೇಜನ ತಂಗಲೇಕೆ ತಗರಲೇಕೆ | ಸಾರಂಗದಾಮನೊಲೆದಿರನದೇಕೆ ತಂಗಿ, ತಾರೆ, ತರಣಿತೇಜನ | ರಂಗೇಶ ಪುರಂದರ ವಿಠಲನ ಮಂಗಳಾಂಗ | ಒಲೆದಿರನದೇಕೆ ತಂಗಿ, ತಾರೆ, ತರಣಿತೇಜನ