ಅಯ್ಯಯ್ಯ! ಕೈಕೆ ಮುನಿದರೆ ಏನವ್ವ ! ।
ದೀವೌಕಸರನಾಳುವ ನಿನ್ನ ಅದ್ವೈತತನವು |
ಅಚಿಂತ್ಯ ಶಕ್ತಿ ಹೋಹುದೆ ಪ್ರಭುವೆ ।
ಅಯ್ಯ ಮಂಥರೆ ಜರಿದರೆ ಪಂತಿದೇರ ನಾಳುವ 1
ನಿನ್ನ ಲೋಕತಿಂತಿಣಿಯ ಗೆಲುವ ಶೀಲ ಬಹುದೆ |
ವಿಭುವೆ ಅಯ್ಯ ತಂದೆಯಿಲ್ಲದಿರೆ |
ತರುಲತೆಗೆ ಪಶು ಪಕ್ಷಿಗೆ ಚೇತನ ವೃಂದಕೆ |
ಮುಕುತಿಯನಿತ್ತ ಮಹಿಮೆ ಹೋಹುದೆ ಅಯ್ಯ ।
ಆರುಮುನಿದರೆ ಆರು ಜರೆದರೆ ಆರೊಲ್ಲದಿದ್ದರೆ |
ಹೀನವುಂಟೆ? ತಾರಕ ಬ್ರಹ್ಮದ್ವಿರೂಪನೆ ನಿನಗೆ ಅಯ್ಯ |
ಜಾನಕಿ ವಲ್ಲಭ ಲಕ್ಷಣಾಗ್ರಜ ಹನುಮನನಾಳ್ದ |
ರಾಮ ರಾಯ ಪುರಂದರ ವಿಠಲ ಅಯ್ಯ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ