ಕೀರ್ತನೆ - 1377     
 
ಹಸ್ತಿ ಗಿರೀಶನೆ ಶಂಖ ಚಕ್ರ । ಹಸ್ತನೆ ಗದೆಯ ಭಯ | ಹಸ್ತ ಉತ್ತರದೇರಿಯ ಆವರಿಸಿದವನೆ | ಚಿತ್ತಜಾನಂದದ ಪುತ್ಥಳಿಯೆ | ರತ್ನ ಮುಕುಟ ಕುಂಡಲಧರ | ಕೌಸ್ತುಭ ಪೀತಾಂಬರಧರನೆ | ವಸ್ತು ವರದ ರಾಜ ಪುರಂದರ ವಿಠಲ | ಈತನ ನಂಬಿ ಬದುಕಿರೊ ।