ಹೆಜ್ಜೆಗೆ ಹೆಜ್ಜೆಗೆ ಸಾವಿರ ಸಾವಿರ ಹೊನ್ನಿವರಾಯ ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಪರಸಮಯವ ಮೆಟ್ಟಿ ನಡೆವ ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಸೂಳೆಯರುಡಿ ಮುಡಿ ಮೊಲೆ ನೋಡಿ |
ನಲಿದೋಡುವ ಹಾರುವರ ಪರಿಹಾಸಕ್ಕೆ ನಗುವ
ವಿನೋದಿರಾಯ ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಕಡೆಯಾ ಹೆಣ್ಣ ಗಂಡ ಮಾಡುವ
ರಾಯ ರಾವುತರಾಯ |
ಹೆಜ್ಜೆಗೆ ಹೆಜ್ಜೆಗೆ ತಾಳಮೇಳಕೆ ತಲೆ ದೂಗುವ
ರಾಯ ರಾವುತ ರಾಯ |
ಹೆಜ್ಜೆಗೆ ಹೆಜ್ಜೆಗೆ ಮಾಲಕುಮಿಯ ಕುರುಳ ಅಳಿಕುಂತಳ
ಮಾತಿದ್ದುವ ಕಂಚಿಯ ವರದರಾಜ |
ಪುರಂದರವಿಠಲರಾಯ ರಾವುತರಾಯ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ