ಕೀರ್ತನೆ - 1371     
 
ಒಂದೇ ಒಂದು ಬೆರಳ ಜಪ ಒಂದೇ ಐದು ಗೆರೆಯ ಜಪ । ಒಂದೇ ಹತ್ತು ಪುತ್ರ ಜೀವಿಮಣಿಯ ಜಪ । ಒಂದೇ ನೂರು ಶಂಖಮಣಿಯ ಜಪ । ಒಂದೇ ಸಾವಿರ ಹವಳದ ಜಪ । ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜಪ । ಒಂದೇ ಹತ್ತು ಲಕ್ಷ ಸುವರ್ಣ ಮಣಿಯ ಜಪ । ಒಂದು ಕೋಟಿ ದರ್ಭೆ ಬೆಟ್ಟಿನ ಜಪ । ಒಂದೇ ಅನಂತ ಶ್ರೀ ತುಲಸೀ ಮಣಿಯ ಜಪ- । ವೆಂದು ಪುರಂದರ ವಿಠಲ ಪೇಳ್ದ |