ಕೀರ್ತನೆ - 1357     
 
ಸಂತತಿಯಪ್ಪುದು ರಾಮಾಯಣವ ಕೇಳಲು ಸಕಲ ಪಾಪಹರವು ಭಾರತ ಕೇಳಲು ತಂತು ಮಾತ್ರವೆ ವಿಷ್ಣು ಪುರಾಣವ ಕೇಳಲು ತತ್ತ್ವ ವಿವೇಕವು ಬಾಹೋದು ಅಂತರವರಿತು ಭಾಗವತ ಕೇಳಲು ಆಹೋದೈ ಜ್ಞಾನ ಭಕ್ತಿ ವೈರಾಗ್ಯವು ಸಂತತ ಪುರಂದರ ವಿಠಲನ ಸಂಕೀರ್ತನೆ ಮಾಡಲು ಸಕಲವು ಬಾಹೋದು ಸಾಯುಜ್ಯ (ವು).