ಕೀರ್ತನೆ - 1355     
 
ಲೇಸು ದಾಸರಿಗೆ ಕ್ಲೇಶ ದುಷ್ಟರಿಗೆ ಸಿರಿ ಭಾಗವತರಿಗೆ ಪಾಪ ಪಾಷಂಡಿಗಳಿಗೆ ಕೀರ್ತಿ ಕಿಂಕರರಿಗೆ ಅಪಕೀರ್ತಿ ಮಂಕುಗಳಿಗೆಲ್ಲ ಸುಖ ಮಹಾತ್ಮರಿಗೆ ಕಷ್ಟ ನಷ್ಟರಿಗೆ ಪುರಂದರ ವಿಠಲನ ಆಳುಗಳಿಗೆ ಮುಕುತಿ ಇತರರಿಗೆ ಅಂಧಂತಮಸ್ಸು ಸಂದೇಹವಿಲ್ಲವೊ.