ಕೀರ್ತನೆ - 1354     
 
ಯದು ಕೃಷ್ಣ ಯಾದವ ಕೃಷ್ಣ ಎಂದವರಿಗೆ ಅಂತ್ಯ ಕಾಲದಲಿ ಮೊದಲಿನ ಶಬ್ದ ಕೇಳಿದ ಮಾತ್ರದಿಂದ ಮುದದಿ ಮುಕ್ತಿಯನಿತ್ತಂತೆ ಸದಾ ಭಕುತಿಯ ತನ್ನ ಪಾದದಲ್ಲಿ ಕೊಟ್ಟು ಎರಡನೆಯ ನಾಮ ಕೇಳಿದ್ದಕ್ಕೆ ಏನ ಕೊಡಲೆಂದು ನಾಚಿ ನಮ್ರ ಸದಯ ಶ್ರೀ ಪುರಂದರವಿಠಲ ಸ್ವಾಮಿ ಮುದದಿ ನಾಮ ಸ್ಮರಣಿಯ ಕೊಟ್ಟು ಕಾಯ್ದ,