ಕೀರ್ತನೆ - 1351     
 
ನಿನ್ನ ಕಾಲ ಹೆಜ್ಜೆಯ ಪಿಡಿದು ನಾನಿಲುವೆ ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ ನಿನ್ನ ಛಕ್ರಚಾಮನ (ಛತ್ರಚಾಮರ) ಪಿಡಿದೇಳುವೆ ನೀರ ನೀವಳಿಸಿಕೊಂಡು ಕೊಬ್ಬುವೆನು ಬಿಡೆನು ಬಿಡೆನು ನಿನ್ನ ಚರಣಕಮಲವ ಪುರಂದರ ವಿಠಲ ನಿನ್ನ ಪಾದವ ಬಿಡೆನು.