ಕೀರ್ತನೆ - 1348     
 
ತನುವೆಂಬ ದೊಡ್ಡ ದೋಣಿಯಲಿ ಹರಿನಾಮವೆಂಬ ಬಂಡವ ತುಂಬಿ ವ್ಯವಹಾರವನು ಮಾಡುವೆನಯ್ಯ ಇಂದ್ರಿಯಗಳೆಂಬ ಸುಂಕಿಗರು ಅಡ್ಡಾದರೆ ಮುಕುಂದನ ಮುದ್ರೆಯನೇ ತೋರಿ ಹೊಳೆಯ ದಾಟುವೆನಯ್ಯ ಪುರಂದರವಿಠಲನಲ್ಲಿಗೆ ಹೋಗೆ ಮುಕುತಿ ಸುಖದ ಲಾಭವ ಪಡೆವೆ.