ಕೀರ್ತನೆ - 1339     
 
ವೇದಗಳೆಂಬ ದಾವಣಿಗಳಲ್ಲಿ | ನಾಮಗಳೆಂಬ ಮೂಗುನೇಣುಗಳಿಂದ | ಜೀವರುಗಳೆಂಬ ಎತ್ತುಗಳನೆ ಕಟ್ಟಿ | ಭಕುತಿರಸವೆಂಬ ಮುಟ್ಟುಗಳನೆ ಹಾಕಿ | ಕರ್ಮವೆಂಬ ಭಾರವನು ಹೇರಿ | ಆಡವನೊಬ್ಬ ಪುರಂದರ ವಿಠಲನೆಂಬ | ದೊಡ್ಡ ಬೇಹಾರಿಗ ಕಾಣಿರೊ |