ಕೀರ್ತನೆ - 1336     
 
ನಿನ್ನವನೆಂದೆನ್ನ ಕೈಯ ಪಿಡಿಯಲು | ನಿನ್ನ ಸೇವೆಯ ಸಾಧನಕೆ ಯತ್ನವ ಮಾಳ್ಪೆ | ಎನ್ನ ಯತ್ನಕ್ಕೆ ನಿನ್ನ ಸಹಾಯವು | ನಿನ್ನ ಯತ್ನವು ನಿನ್ನ ಸ್ವಾಧೀನ | ನಿನ್ನ ಯತ್ನಕೆ ನಿನ್ನ ಸಹಾಯವು । ನಿನ್ನಾಧೀನ ಸರ್ವವು ಪುರಂದರ ವಿಠಲ