ಕೀರ್ತನೆ - 1332     
 
ಬೆನಕನ ನಾಕೊಲ್ಲೆನವ್ವ ಕುಲುಕಿ ನಡೆವವನ ಷಣ್ಮುಖನನೊಲ್ಲೆನವ್ವ ಹಲವು ಬಾಯವನ ಇಂದ್ರನನಾನೊಲ್ಲೆನವ್ವ ಮೈಯೆಲ್ಲ ಕಣ್ಣಿನವನ ಚಂದ್ರನ ನಾನೊಲ್ಲೆನವ್ವ ಕಳೆಹೀನನಾದವನ ರವಿಯ ನಾನೊಲ್ಲೆನವ್ವ ಉರಿದು ಮೂಡುವನ ಹರನ ನಾನೊಲ್ಲೆನವ್ವ ಮರಳುಗೊಂಬುವನ ಧರೆಗತಿ ಚೆಲುವನು ಜಗಕೆಲ್ಲ ಒಡೆಯನು ತಂದು ತೋರೆ ನಮ್ಮ ಪುರಂದರ ವಿಠಲನ.