ಕೀರ್ತನೆ - 1331     
 
ಎಲೆ ಜಿಹ್ವೆ ನೀ ಕೇಶವನ ನಾಮವನೆ ಸ್ತುತಿಸು ಎಲೆ ಕರಗಳಿರ, ಶ್ರೀ ಹರಿಯ ಪೂಜೆಯ ಮಾಡಿ ಎಲೆ ನೇತ್ರಗಳಿರ, ಶ್ರೀ ಕೃಷ್ಣನ ಮೂರ್ತಿಗಳ ನೋಡಿ ಎಲೆ ಕಾಲುಗಳಿರ, ಶ್ರೀ ಹರಿಯ ಯಾತ್ರೆಯ ಮಾಡಿ ಎಲೆ ನಾಸಿಕವೆ, ಮುಕುಂದನ ಚರಣ ಪರಿಮಳವನಾಫ್ರಾಣಿಸುತಿರು ಎಲೆ ಶಿರವೆ, ನೀನಧೋಕ್ಷಜನ ಪಾದ ಜಲರುಹದಲ್ಲಿ ಎರಗಿರು ಎಲೆ ಮನವೆ, ನೀ ವರದ ಕೇಶವ ಪುರಂದರ ವಿಠಲನ ಭಕುತಿ ವಿಷಯಗಳಲ್ಲಿ ಅನುದಿನವು ಕಳೆಯುತ್ತಿರು.