ಕೀರ್ತನೆ - 1326     
 
ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ಸತಿಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ರತಿಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ ಇನಿತು ಸಂತೋಷ ಅವರವರಿಗಾಗಲಿ ಎನಗೆ ಸಂತೋಷ ನಿನ್ನ ರತಿಯೊಳಗೆ ಪುರಂದರ ವಿಠಲ.