ಕೀರ್ತನೆ - 1325     
 
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ ನಿನ್ನನೆ ಬೇಡಿ ಬೇಸರಿಸುವೆನಯ್ಯ ನಿನ್ನ ಕಾಲನು ಪಿಡಿವೆ ನಿನ್ನ ಹಾರಯಿಸುವೆ ನಿನ್ನ ತೊಂಡರಿಗೆ ಕೈ ಗೊಡುವೆ ನಿನ್ನಂತೆ ಸಾಕಬಲ್ಲವನು ಇನ್ನುಂಟೆ ಘನ್ನ ಪುರಂದರ ವಿಠಲ ದೇವರ ದೇವ.