ಕೀರ್ತನೆ - 1310     
 
ಖಳರ ನೋಟವೇ ಹಾವಲ್ಲದೆ ಹಾವ ಬೇರೆ ಇನ್ನರಸಲೇತಕೆ? | ಖಳರ ನೋಟವೇ ಹುಲಿಯಲ್ಲದೆ ಹುಲಿಯ ಬೇರೆ ಇನ್ನರಸಲೇತಕೆ? । ಖಳರಕೂಟವೇ ವಿಷವಲ್ಲದೆ ವಿಷವ ಬೇರೆ ಇನ್ನರಸಲೇತಕಯ್ಯ? | ಖಳರೊಳಗೆನ್ನ ಪುಟ್ಟಿಸಿದೆ ಖಳರಿಗೊಪ್ಪಿಸಿ ಕೊಟ್ಟೆಯಯ್ಯ | ಖಳರ ಖಂಡದಿಂಡವ ಮುರಿವನೊ | ಖಳರ ನಿವಾರಣ ಪುರಂದರ ವಿಠಲ ಸದಾಸವ೵ದಾನೋಡಾ