ಕೀರ್ತನೆ - 1303     
 
ಮನದಭಿಮಾನಿ ಮಹಾರುದ್ರನ ಭಜಿಸಲು | ಅನವರತ ಶ್ರೀಹರಿಯ ಆರಾಧಿಸುವುದಕ್ಕೆ । ಮನಸುದ್ದಿಯನೀವ ಮತಿ ಕೊಡುವ | ಮನುಜೋತ್ತಮರು ಕೇಳಿ ಮನಕೆ ಪ್ರೇರಕನವನು | ವನಜಾಕ್ಷ ಪುರಂದರ ವಿಠಲನ ಒಲುಮೆಗೆ | ಮನಸು ಕಾರಣವಲ್ಲದೆ ಮಿಗಿಲಾವುದು.