ಕೀರ್ತನೆ - 1302     
 
ಗುರು ಕರುಣ ಹೊಂದುವುದು ಪರಮ ದುರ್ಲಭವಯ್ಯ ಪರಿ ಪರಿ ವ್ರತಗಳನ್ನಾಚರಿಸಲು ಫಲವೇನು ಶರೀರಾದಿ ಪುತ್ರಮಿತ್ರ ಕಳತ್ರ ಬಾಂಧವರು ಇರಿಸುವರೆ ಸದ್ಗತಿಗೆ ಸಾಧನದಿ ನಿರುತವು ಗುರುಪಾದ ನಿಜವಾಗಿ ಮನದಲ್ಲರಿತು ಭಜಿಸಲು ಅಖಿಲ ಸಂಪದವಕ್ಕು ಪುರಂದರ ವಿಠಲ.