ಕೀರ್ತನೆ - 1301     
 
ಗುರು ಕರುಣ ವಾಹೋದು ಪರಮ ದುರ್ಲಭವಯ್ಯ ಪರಿಪರಿ ವ್ರತಗಳಾಚರಿಸಿ ಫಲವೇನು? ಗುರು ಕರುಣವೊಂದಲ್ಲದೆ ಗತಿ ಬೇರೆಯುಂಟೆ? ಶರೀರದ ಪುತ್ರ ಮಿತ್ರ ಕಳತ್ರ ಬಾಂಧವರು ನೆರೆ ಸಲಿಸುವರೆ ಸದ್ದತಿಗೆ ಸಾಧನವ? ನಿರುತದಿ ಗುರುಪಾದವ ನಿಜವಾಗಿ ಮನದಲ್ಲಿ ಅರಿತು ಭಜಿಸಲು ಅಖಿಳ ಸಂಪದವಿತ್ತು ಪರಿಪಾಲಿಸುವ ನಮ್ಮ ಪುರಂದರ ವಿಠಲ.