ಕೀರ್ತನೆ - 1298     
 
ಮಲಗಿ ಪಾಡಿದರೆ ಕುಳಿತು ಕೇಳುವನು ಕುಳಿತು ಪಾಡಿದರೆ ನಿಂತು ಕೇಳುವನು ನಿಂತು ಪಾಡಿದರೆ ನಲಿದು ಕೇಳುವನು ನಲಿದು ಪಾಡಿದರೆ ಸ್ವರ್ಗ ಸೂರೆ ಬಿಟ್ಟನೆಂಬ ಪುರಂದರ ವಿಠಲ,