ಕೀರ್ತನೆ - 1296     
 
ಸಕಲ ಸಾಧನಕೆಲ್ಲ ಸಿದ್ಧಿ ಗೊಳಿಸುವುದು ಭಕುತಿ ಸಾಧನವಲ್ಲದ ಬೇರೆ ಸಾಧನವುಂಟೆ? ಭಕುತಿಗೆ ಅಭಿಮಾನಿ ಭಾರತೀ ದೇವಿಯರ ಕರುಣ ಮುಕುತಿ ಸಾಧನವೆಂದು ಮನದಲ್ಲಿ ಸ್ತುತಿಸಿರೊ ಮುಕುತೀಶ ನಮ್ಮ ಪುರಂದರ ವಿಠಲನ ಕರುಣಕ್ಕೆ ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ?.