ಕೀರ್ತನೆ - 1284     
 
ನಿನ್ನಡಿ ಇಳೆಯ ನೀರಡಿಯಾಡಿತು | ನಿನ್ನ ಉಂಗುಟವು ಬ್ರಹ್ಮಾಂಡ ನುಂಗಿತು | ನಿನ್ನ ನಖ ಸುರನದಿಯ ತಂದಿತು | ನಿನ್ನ ಕರ ಮಧುಕೈಟಭರನೊರಸಿತು | ನಿನ್ನೆರಡು ತೋಳು ಸಿರಿ ಲಕುಮಿಯನಪ್ಪಿತು । ನಿನ್ನ ಪಾದದ ನೆನಹೇ ಸಕಲ ಸಂಪದ (ವೋ) ಪುರಂದರ ವಿಠಲ.