ಕೀರ್ತನೆ - 1282     
 
ಅಣುರೇಣು-ತೃಣದಲ್ಲಿ ಪರಿಪೂರ್ಣನಾಗಿರುವ ಗುಣವಂತನೇ ನಿನ್ನ ಮಹಿಮೆ ಗಣನೆ ಮಾಡುವರಾರು? ಎಣಿಸಿ ನೋಡುವಳಿನ್ನು ಏಣಾಕ್ಷಿ ಸಿರಿದೇವಿ ಜ್ಞಾನ ಸುಗುಣತತ್ವ ವೇಣುಗೋಪಾಲ ಹರೆ ಕಾಣಿಸೊ ನಿನ್ನ ಮಹಿಮೆ ಪುರಂದರ ವಿಠಲ.