ಕೀರ್ತನೆ - 1277     
 
ಆಳುಗಳ ಪರಿಯ ಆಳಿದನೆ ಬಲ್ಲ | ಆಳಿದನ ಪರಿಯ ಆಳುಗಳೆ ಬಲ್ಲರು | ಆಳುಗಳ ಪರಿಯ ಆಳಿದನೆ ಪರಿಯ | ಆರೇನನೆಂದರೂ ಆರೇನ ಮಾಡುವರಯ್ಯ | ಆರ ಕೊಂಡೆಮಗೆ ಏನ ಮಾಡುವುದಯ್ಯ । ಆರುಮುನಿದೆಮ್ಮನು ಏನು ಮಾಡುವರಯ್ಯ । ಸಿರಿ ಪುರಂದರ ವಿಠಲಗೆ ನಮಗೆ ಇಂದೆ ಬಂದಿತೆ ಸ್ವಾಮಿ-ಮೃತ್ಯ ಸಂಬಂಧ?