ಕೀರ್ತನೆ - 1274     
 
ಕ್ಷೀರ ಸಾಗರಕೆ ಶ್ರೀ ಹರಿಯು ಬಂದಂತೆ । ಪ್ರಹ್ಲಾದನಲ್ಲಿಗೆ ನರಸಿಂಹ ಬಂದಂತೆ । ಬಲಿಯ ಮನೆಗೆ ವಾಮನ ಬಂದಂತೆ 1 ಅಕ್ರೂರನ ಮನಗೆ ಶ್ರೀ ಅಚ್ಯುತ ಬಂದಂತೆ | ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ | ಗೋಪಿಯರ ಮನೆಗೆ ಗೋಪಾಲ ಬಂದಂತೆ | ಲಕ್ಷ್ಮೀಪತಿ ಪುರಂದರ ವಿಠಲ ದಿವ್ಯನಾಮವು | ಎನ್ನ ನಾಲಗೆಗೆ ಬಂದು ನೆರೆದಿತು