ಕೀರ್ತನೆ - 1273     
 
ಜಯ ಗದಾಧರ ಜಯ ಜಯ ಜಗದೀಶ । ಜಯ ಸೇತುವಿನಲಿ ರಾಮ | ಜಯ ಸೋದೆಯಲಿ ನೆಲಸಿ ಮೆರೆವ ತ್ರಿವಿಕ್ರಮರಾಯ |. ದ್ವಾರಾವತಿಯ ಗೋವಿಂದ ಜಯ ವಾದಿರಾಜ ಪ್ರಿಯ ಹಯವದನ ಜಗದ್ದೇವನೇ ಜಯಮಧ್ವ ಗುರುವರದನೇ । ಜಯ ಜಯ ಕರುಣಾಕರ ಜಯ ಜಯ ಕಮಲನಾಭ | ಜಯ ಜಯ ಕಂಬುಕಂಠ ಕೌಸ್ತುಭಧರನೇ । ಜಯ ಜಯ ಮರಕತ ಮಕರ ಕುಂಡಲಧರನೆ | ಅನಂತಾನಂತ ಗುಣ ನಿಲಯ ಅನಂತಾನಂತ ರವಿಶತತೇಜ | ಅನಂತಾನಂತ ಪುರಂದರ ವಿಠಲ ನಮೋ ನಮೋ