ಈ ಮರ್ತ್ಯದೊಳಗಿಲ್ಲ ಅರಸಿ ನೋಡಲು ದೇವ |
ಅರಸು ಮೆಚ್ಚಲು ಪ್ರಜೆ ದ್ವೇಷಿಸುವರು |
ಆಳುಗಳು ಒಲಿದಲ್ಲಿ ಅರಸು ಮೆಚ್ಚನು ಒಮ್ಮೆ |
ಈ ಮರ್ತ್ಯ ಜನರ ಚರಿತವು ಎಲೊ ರಂಗ |
ಮೂಲೋಕದರಸು ನೀ ನಿನ್ನಯ ಭಕ್ತ ಜನರುಗಳು |
ನೀ ಕರುಣಿಸಲು ತಾವು ಕರುಣಿಸುವರು |
ನೀನೊಲಿಯದಿರೆ ಒಮ್ಮೆಯೂ ತಿರುಗಿ ನೋಡರು ಹರಿಯೆ |
ಈ ಪರಿಯ ನಿನ್ನ ಆಜ್ಞೆಯಲಿ ಈ ಮಹಾವಿಭವದೊಳು |
ಆರು ಮೊರೆಯಾಗುವರು ಆರು ರಕ್ಷಿಪರೆನ್ನ |
ಆರಂಜದಿರೆಂದು ಅಭಯವನೀವರ ಕಾಣೆ |
ಶ್ರೀನಾಥ ಅನಿಮಿತ್ತ ದಯಾಸಿಂಧೂ ।
ನಿನ್ನ ದಾಸರ ಒಲುಮೆಯ ಪಾಲಿಸೊ ಗುಣನಿಧೆ ।
ನಿನ್ನ ಚರಿತಾಮೃತವ ತೋರಿ ಸಲಹಯ್ಯ ।
ಪ್ರಸನ್ನ ಮೂರುತಿ ಅಹೋಬಲ ನಿಲಯ
ಪುರಂದರ ವಿಠಲರಾಯ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಸಂಕೀರ್ಣ