ನೀನೇ ಕಾರಣ ಅಕಾರಣರು ಬೊಮ್ಮಾದಿಗಳು |
ನೀನೇ ಕರ್ತೃ ಅಕರ್ತೃಗಳವರು |
ಸರ್ವತಂತ್ರ ಸ್ವತಂತ್ರ ನೀನು ಅಸ್ವತಂತ್ರರವರು |
ಮೂಲ ನೀನು ಮಧ್ಯಮರವರು |
ನಿತ್ಯ ಎಂದೆನಿಪೆ ಲಯಕ್ಕಾಗುವರವರು |
ಭೋಕ್ತ ಎಂದೆನಿಪೆ ಸರ್ವಾಂತರಾತ್ಮಕನಾಗಿ 1
ಸ್ವೀಕರಿಸುವ ಶಕ್ತಿ ನಿನ್ನಧೀನವಯ್ಯ ।
ಅನಾದಿಕಾಲ-ಕರ್ಮ ಗುಣಗಳನನುಸರಿಸಿ |
ಫಲಗಳನುಣಿಸುವೆ ಪುರಂದರ ವಿಠಲ