ಕೀರ್ತನೆ - 1260     
 
ಆದಿಸೃಷ್ಟಿಯೊಳು ಆರಾರು ಮೊದಲುದಿಸಿದರು | ಅವರ ನೆರೆ ಅಧಿಕ ಅವರ ನೋಡಯ್ಯ | ಅವರನಂತರದಲ್ಲಿ ಕಾಲ -ಜಯಾದಿಗಳು ಉದಿಸಿದರು | ಏನು ಆ ಮಹಂತರಾದವರ ಅಳವ ನೋಡಯ್ಯ | ಅವರನಂತರ ತಾರತಮ್ಯ ಅನಾದಿಸಿದ್ಧವಾಗೆ । ಪುರಂದರವಿಠಲನ ಸಂತತಿಯ ನೋಡಯ್ಯ