ಕೀರ್ತನೆ - 1257     
 
ಶ್ರೀನಾರಾಯಣದೇವ ನೀನು ಶ್ರೀ ಲಕುಮಿಯ ಕೂಡ ಸುಖಿಸುತಿದ್ದು । ಶ್ರೀ ವಾಸುದೇವ ನೀ ಮಾಯಾದೇವಿಯಲ್ಲಿ ಆ ಬೊಮ್ಮಕುವರನ ಪಡೆದೆಯಲ್ಲ | ಶ್ರೀಪ್ರದ್ಯುಮ್ನ ನೀ ಕೃತಿಯಲ್ಲಿ ವಾಣಿ-ಭಾರತಿಯರ ಪಡೆದೆಯಲ್ಲ | ಶ್ರೀ ಸಂಕರ್ಷಣ ದೇವ ನೀ ಜಯಾ ದೇವಿಯಲ್ಲಿ ವಾಯುಕುಮಾರನ ಪಡೆದೆಯಲ್ಲ | ಆ ಕುವರರಿಗೆ ಆ ಕುವರಿಯರನು ಮದುವೆ ಮಾಡಿದೆಯಲ್ಲ ಪುರಂದರ ವಿಠಲ