ಕೀರ್ತನೆ - 1254     
 
ಆರು ಅಕ್ಷರವುಳ್ಳ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ ಈ ರೀತಿ ಇಪ್ಪತ್ತು ನಾಲ್ಕು ಅಕ್ಷರಗಳಿಂದ ತೋರುತಲಿ ಗಾಯತ್ರಿಯ ರಚಿಸಿದ ಹರಿಯು ಮೆರಿವುವೈ ಪುರುಷ ಸೂಕ್ತಾದಿ ಅನಂತವೇದರಾಶಿ ದೊರೆ ಎಂದು ಪೊಗಳುವ ಓಂಕಾರ ಶ್ರೀಕಾರ ಮೆರೆವುವೈ ಐವತ್ತೊಂದು ಅಕ್ಷರಗಳು ಈ ರೀತಿ ಅಶೇಷ ಗುಣಾಧಾರಯೆಂದು ನಾರಾಯಣೋಥ ಪೂರ್ಣ ಗುಣಯುತ ಭರದಿ ಜ್ಞಾನ ರೂಪ ಶಬ್ದನೊ ಮೆರೆವ ದೇವೇಶ ಶತರ್ದನ ಧರಿಸಿದೆ ಪುರಂದರ ವಿಠಲ.