ಕೀರ್ತನೆ - 1246     
 
ಮುಂದೆ ನೃಕಂಠೀರವ ಕಂಬಿಕಾರನಾಗಿ | ನಂದಗೋಪನಂದನನಹನು ಹಿಂದಿನ ಕಾಲಾಳು | ಅಂಜದಿರೆಲೆ ಜೀವ ರಾಮ-ಲಕ್ಷ್ಮಣರು ಧನುರ್ಧರರಾಗಿ ಎಡಬಲದಲ್ಲಿ ತಂದೆ ತಾಯಿ ಶಿಶುವ ನೋಡುವ ಅಂದದಲಯ್ದಾರು | ಅಂಜದಿರೆಲೊ ಜೀವ ಅನಿಮಿತ್ತ ಬಂಧು ಕಾಣೋ ತನುಸಂ- | ಬಂಧಿಯಂತಲ್ಲ ಅನವರತ ಪುರಂದರ ವಿಠಲನ ಕಾಪು ಘನವೊ