ಕೀರ್ತನೆ - 1244     
 
ಹರಿ ನಡೆಯದಿರಲು ನಡೆಯಲಿಲ್ಲೀ ಜಗವು । ಹರಿ ನುಡಿಯದಿರಲು ನುಡಿಯಲಿಲ್ಲೀ ಜಗವು । ಹರಿ ನೋಡದಿರಲು ನೋಡಲಿಲ್ಲೀ ಜಗವು । ಹರಿ ಮಾಡದಿರಲು ಮಾಡಲಿಲ್ಲೀ ಜಗವು 1 ಹರಿ ಎವಯಿಕ್ಕದಿರಲು ಎವೆಯಿಕ್ಕದೀ ಜಗವು । ಹರಿ ಉಸಿರಿಕ್ಕದಿರೆ ಉಸಿರಿಕ್ಕದೀ ಜಗವು । ಹರಿ ಸರ್ವಚೇಷ್ಟಕ ಹರಿ ಪುರಂದರ ವಿಠಲ | ಹರಿ ಆಡಿಸಿದಂತೆ ಆಡಿಸುತಿಪ್ಪುದೀ ಜಗವು