ನಿನ್ನ ಬೊಮ್ಮ ಮೂರುತಿಗೆ ನಮೋ ನಮೋ ।
ನಿನ್ನ ರುದ್ರ ಮೂರುತಿಗೆ ನಮೋ ನಮೋ ।
ನಿನ್ನ ಇಂದ್ರ ಮೂರುತಿಗೆ ನಮೋ ನಮೋ |
ನಿನ್ನ ಚಂದ್ರ ಮೂರುತಿಗೆ ನಮೋ ನಮೋ |
ನಿನ್ನ ಸೂರ್ಯ ಮೂರುತಿಗೆ ನಮೋ ನಮೋ ।
ನಿನ್ನ ಅಗ್ನಿ ಮೂರುತಿಗೆ ನಮೋ ನಮೋ |
ನಿನ್ನ ಸ್ಥಾವರ ಮೂರುತಿಗೆ ನಮೋ ನಮೋ |
ನಿನ್ನ ಜಂಗಮ ಮೂರುತಿಗೆ ನಮೋ ನಮೋ ಪುರಂದರ ವಿಠಲ
ನಿನ್ನ ವಿಶ್ವಮೂರುತಿಗೆ ನಮೋ ನಮೋ