ಕೀರ್ತನೆ - 1235     
 
ಜಗದುದರನಾಗಿದ್ದು ಜಗದೊಳಗಿಪ್ಪೆ | ಜಗದ್ವಾಪಿಯಾಗಿ ನೀ ಜಗವ ಪಾಲಿಸುವೇ । ಜಗವ ನಲಿದಾಡಿಸುತಲಿಪ್ಪೆ ದೇವಾ | ಜಗದನ್ಯ ಜಗನ್ನಾಥ ಪುರಂದರ ವಿಠಲಮೋಹನ ಜಗದ್ವಂದ್ಯ