ಕೀರ್ತನೆ - 1231     
 
ಬೆಲ್ಲದ ಕಟ್ಟೆಯ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಹುದೇನಯ್ಯ? ಏನ ಓದಿದರೇನು ಏನ ಕೇಳಿದರೇನು ಮನದೊಳಗಿನ ತಾಮಸ ಮಾಣದನಕ ಏನ ಓದಿದರೇನು ಏನ ಕೇಳಿದರೇನು ಕೊಳಲಧ್ವನಿಗೆ ಸರ್ಪ ತಲೆದೂಗುವಂದದಿ ಎನ್ನೊಡೆಯ ಕೇಳಯ್ಯ ಶ್ರೀಪತಿ ಪುರಂದರ ವಿಠಲ.